Posts

Showing posts from June, 2022

ಸಂಚಿಕೆ ೨: ಎಲ್ಲವೂ ಆನಂದಮಯ !!

ನಾಣಿ ಭಟ್ರ ಪರಿವಾರದ ಕಥೆ ಕೇಳೋಕೆ ಬಂದಿದ್ದೀರಾ? ಇವತ್ತಿನ ಕಥೆ ನಾನು ಹೇಳ್ತೇನೆ ಕೇಳಿ. ನನ್ನ ಹೆಸರು ಚಿಕ್ಕು. ಇಗೋ ಇಲ್ಲಿ ನನ್ನ ಪಕ್ಕ ದೇವದಾಸ್ ತರಹ ಕೂತಿದ್ದಾನಲ್ಲ ಇವನು ನಿಮಗೆ ಗೊತ್ತಿರಬೇಕಲ್ಲ, ಭಟ್ರ ಕಿರಿಯ ಮಗ ಆನಂದ ಆದರೆ ಇವತ್ತು ಅವನ ಆನಂದ ಮಾಯವಾಗಿದೆ. ಯಾಕೆ ಅಂತೀರಾ? ಇವತ್ತು ಯಾಕೆ ಅಂತ ನನಗೆ ಇನ್ನೂ ಗೊತ್ತಿಲ್ಲ, ಅಮ್ಮ ಮನೆ ಒಳಗಿಂದ ಹೊರಗೆ ಆತಂಕದಲ್ಲಿ ಓಡಾಡ್ತಾ ಇದ್ದಾರೆ. ಯಾಕೆ ಅಂತ ತಿಳೀತಾ ಇಲ್ಲ. ಇವನು ಬೇರೆ ಅಳೋದು ಬಿಟ್ಟು ಎನೂ ಹೇಳ್ತಾ ಇಲ್ಲ. ಇವತ್ತಿನ ಕಥೆ ಸ್ವಲ್ಪ ಹೊತ್ತಲ್ಲೇ ಗೊತ್ತಾಗುತ್ತೆ ಬಿಡಿ. ಅಲ್ಲಿವರೆಗೂ ನೀವು ಆನಂದನ ಹಳೆ ಕಥೆಗಳನ್ನು ಕೇಳಿ. ಇವನು ಪ್ರತಿ ಸರಿ ಏನಾದ್ರೂ ಎಡವಟ್ಟು ಮಾಡಿದಾಗೆಲ್ಲ ಇಲ್ಲೇ ಬಂದು ಕೂರೋದು. ಕೆಲವೊಂದು ಸಾರಿ ನನ್ನ ಹತ್ರ ಹೇಳ್ತಾನೆ ಏನಾಯ್ತು ಅಂತ, ಇಲ್ಲಾಂದ್ರೆ ಆಮೇಲೆ ಅಮ್ಮ ಬಂದು ಮಾತಾಡುತ್ತಿರಬೇಕಾದ್ರೆ ವಿಷಯ ಗೊತ್ತಾಗುತ್ತೆ. ಮೊದ ಮೊದಲು ಇವರು ಮಾತಾಡೋದು ಅರ್ಥನೇ ಆಗುತ್ತ ಇರಲಿಲ್ಲ. ಈಗೀಗ ಸ್ವಲ್ಪ ಸ್ವಲ್ಪ ಅರ್ಥ ಆಗುತ್ತ ಇದೆ. ಹೋದ ವಾರ ದೊಡ್ಡ ಗಲಾಟೆ ಮಾಡಿದ್ದ. ಈ ಮನೇಲಿ ಏನೇ ಗಲಾಟೆ ಆಗೋದಿದ್ರೂ ಅದು ನಡೆಯುವುದು ಈ ಅಂಗಳದಲ್ಲಿ. ಯಾಕೇಂದ್ರೆ ಭಟ್ರು ಜಾಸ್ತಿ ಸಮಯ ಕಳೆಯೋದೇ ಈ ಜಗಲಿ ಮೇಲೆ ಕೂತು. ಅಮ್ಮ ಕಂಪ್ಲೇಂಟ್ ತಗೊಂಡು ಅಂಗಳಕ್ಕೆ ಬಂದು ಬಿಡ್ತಾರೆ. ಹಾಗಾಗಿ ನಂಗೂ ಎಲ್ಲ ವಿಷಯ ಗೊತ್ತಾಗೋದು. ಆ ದಿನ ಸಂಜೆ ಯಾವತ್ತಿನಂತೆ ಭಟ್ರು ಜಗಲಿ ಮೇಲೆ ಸೊಳ್ಳೆ ಹೊಡೀತಾ ಕೂತಿದ್ದ...

ಸಂಚಿಕೆ ೧: ಕರೆಂಟ್ ಬಂತು !!

ದೃಶ್ಯ ೧: [ ನಾಣಿ ಭಟ್ರು ನೆಲದ ಮೇಲೆ ತನ್ನ ಮಗನ ಕಾಲಿನ ನಡುವೆ ಸೋಫಾಗೆ ಒರಗಿ ಕುಳಿತು ದಿನಪತ್ರಿಕೆ ಓದುತ್ತಿದ್ದಾರೆ. ಅವರ ಹಿರಿ ಮಗ ಹರ್ಷ ಸೋಫಾದ ಮೇಲೆ ಕುಳಿತು ತಂದೆಯ ತಲೆಗೆ ಎಣ್ಣೆ ಹಚ್ಚುತ್ತಾ ತಲೆ ಮಸಾಜ್ ಮಾಡುತ್ತಿದ್ದಾನೆ. ಪಕ್ಕದಲ್ಲೇ ಇನ್ನೊಂದು ಕುರ್ಚಿಯಲ್ಲಿ ಕಿರಿಯ ಮಗ ಆನಂದ ಕುಳಿತಿದ್ದಾನೆ. ಒಂದು ಕೈಯ್ಯಲ್ಲಿ ಟಿವಿ ರಿಮೋಟ್, ಇನ್ನೊಂದು ಕೈಯ್ಯಲ್ಲಿ ಟೂತ್ ಬ್ರಶ್. ಟಿವಿ ಆನ್ ಆಗುತ್ತಿಲ್ಲ, ಹಾಗಾಗಿ ರಿಮೋಟ್ ಹಿಂದುಗಡೆ ಬ್ರಶ್ ಹಿಡಿದುಕೊಂಡಿರುವ ಕೈಯ್ಯಿಂದ ಹೊಡೀತಾ ಇದ್ದಾನೆ. ಅಡುಗೆ ಕೋಣೆಯಲ್ಲಿ ಭಟ್ರ ಹೆಂಡತಿ ದೋಸೆ ಕಾವಲಿಗೆ ಎಣ್ಣೆ ಹಚ್ಚುತ್ತಿದ್ದಾಳೆ.] ನಾಣಿ ಭಟ್ರು ಓದುತ್ತಾ, "ಅರೇ ! ಸಂಗೀತಳಿಗೆ ಹೆಣ್ಣು ಮಗು ಅಂತೆ. ಮೊನ್ನೆ ತಾನೆ ಆ ಕ್ರಿಕೆಟರ್ ಜೊತೆ ಮದುವೆಯಾಗಿದ್ದು."  ಹರ್ಷ "ಹೌದು ! ಮದುವೆಯಾಗಿ ಕರೆಕ್ಟ್ ಒಂಬತ್ತು ತಿಂಗಳಾಯಿತು." ಭಟ್ರು ಒಮ್ಮೆ ಹಿಂತಿರುಗಿ ನೋಡಿ ಹಿಃ ಹಿಃ ಎಂದು ಹಲ್ಲು ಬಿಡುತ್ತಾ ನಕ್ಕರು. ಹರ್ಷನೂ ಅಪ್ಪನಂತೆಯೇ ಹಿಃ ಹಿಃ ಎಂದು ತಲೆಯಲ್ಲಾಡಿಸುತ್ತ ನಕ್ಕನು. ಇಬ್ಬರೂ ಆನಂದನ ಮುಖ ನೋಡುತ್ತಿದ್ದಂತೆ, ಅವನು ನಗುತ್ತಿದ್ದವನು ಒಮ್ಮೆಲೇ ಗಂಭೀರನಾದಂತೆ ನಟಿಸಲು ಯತ್ನಿಸಿದನು. ಆನಂದನಿಗೆ ಎಲ್ಲವೂ ಅರಿವಾಗಿದ್ದರೂ ತೋರಿಸಿಕೊಳ್ಳಲು ಸ್ವಲ್ಪ ಮುಜುಗರ, ಯಾಕೆಂದರೆ ಅವನಿಗಿನ್ನೂ ೧೮ ವಯಸ್ಸಾಗಿರಲಿಲ್ಲ. ಎಲ್ಲಿ ತನ್ನ ಕಾಳೆಲಿತಾರೋ ಅಂತ ಹೆದರಿ ಒಳಗೊಳಗೆ ನಗುತ್ತಾ ಆ ಕಡೆ ಈ ಕಡೆ ನೋ...